ಆಂಧ್ರಪತ್ರಿಕಾ
ಪ್ರಸಿದ್ಧ ತೆಲುಗು ಪತ್ರಿಕೆಗಳಲ್ಲೊಂದು. ದೇಶೋದ್ಧಾರಕ ನಾಗೇಶ್ವರರಾವ್ ಪಂತುಲು ಬೊಂಬಾಯಿಯಲ್ಲಿ ವಾರಪತ್ರಿಕೆಯಾಗಿ ಸ್ಥಾಪಿಸಿದರು (1908). ಅನಂತರ ಮದರಾಸಿಗೆ ವರ್ಗಾವಣೆ ಹೊಂದಿ (1914) ಜನಪ್ರಿಯ ದಿನಪತ್ರಿಕೆಯಾಯಿತು. ಇದು ಆಂಧ್ರದೇಶದ ಮೊದಲ ಸುವ್ಯವಸ್ಥಿತ ದೈನಂದಿನ ಪತ್ರಿಕೆ. ಆಂಧ್ರ ಪ್ರಾಂತ್ಯ ರಚನೆಯ ಬಗ್ಗೆ ಇದು ತೋರಿದ ಮಧ್ಯಮ ನೀತಿ, ಮೊದಲ ಮಹಾಯುದ್ಧ, ಅನಂತರದ ಭಾರತ ರಾಷ್ಟ್ರೀಯ ಚಳುವಳಿಯಲ್ಲಿ ಇದು ತೋರಿದ ಧೋರಣೆಗಳಿಂದಾಗಿ ಜನಪ್ರಿಯ ರಾಷ್ಟ್ರಪತ್ರಿಕೆ ಎನ್ನಿಸಿಕೊಂಡಿತು. ಇದರ ಸ್ವರ್ಣಮಹೋತ್ಸವ 1964ರಲ್ಲಾಯಿತು. ಜೊತೆಪತ್ರಿಕೆಗಳಾಗಿ ವಾರಪತ್ರಿಕೆಯೂ ಭಾರತಿ ಎಂಬ ಮಾಸಿಕವೂ ಜನಮನ್ನಣೆಗಳಿಸಿವೆ. ಕೇಂದ್ರ ಕಾರ್ಯಾಲಯ ಹೈದರಾಬಾದ್‍ನಲ್ಲಿದೆ.								 											(ಟಿ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ